ಅವಲಕ್ಕಿ ಒಗ್ಗರಣೆ

Method: 
‍ಒಂದು ಕೈಯಾಡಿಸುವಷ್ಟು ದೊಡ್ಡ ಪಾತ್ರೆಯಲ್ಲಿ ಸಕ್ಕರೆ, ಉಪ್ಪು, ಸಾರಿನ ಪುಡಿ, ಕಾಯಿ ತುರಿ, ಅವಲಕ್ಕಿ, ನೀರುಳ್ಳಿ ಹಾಕಿ
ಒಗ್ಗರಣೆ ಪಾತ್ರೆಯಲ್ಲಿ, ಎಣ್ಣೆ ಹಾಕಿ, ಸಾಸಿವೆ ಸಿಡಿಸಿ, ಉದ್ದಿನ ಬೇಳೆ, ಕರಿ ಬೇವು, ಮೆಣಸು ಹಾಕಿ, ಪರಿಮಳ ಬಂದೊಡನೆ ಅದನ್ನು ಮೇಲಿನ ಸಾಮಾಗ್ರಿಗಳಿರುವ ಪಾತ್ರಗೆ ಹಾಕಿ
ಅವಲಕ್ಕಿಯ ಮೇಲೆ ಸ್ವಲ್ಪ ನೀರು ಚಿಮುಕಿಸಿ, ನಿಂಬೆ ರಸ ಸೇರಿಸಿ
ಚೆನ್ನಾಗಿ ಬೆರೆಸಿ (ನಮ್ಮಲ್ಲಿ ಈ ರೀತಿ ಬೆರೆಸುವುದಕ್ಕೆ - ಮೊರೆಸುವುದು ಎನ್ನುತ್ತೇವೆ) 
ರುಚಿ ನೋಡಿ ನಿಮ್ಮ ಅನಿಸಿಕೆ ತಿಳಿಸಿ‍...
Ingredients needed: 
‍ಅವಲಕ್ಕಿ ಒಗ್ಗರಣೆ ಎಂದಾಗ ನಿಮ್ಮ ಮನಸ್ಸಿಗೆ ಮೊದಲಿಗೆ ಬರುವುದೆ, ದಪ್ಪ ಅವಲಕ್ಕಿಗೆ ಸ್ವಲ್ಪ ಕಾಯಿ, ನಿಂಬೆ ರಸ ಹಾಕಿ ಮಾಡುವುದು ಎಂದುಕೊಳ್ಳುತ್ತೇನೆ. ಆದರೆ ನಾನು ಇಲ್ಲಿ ಪ್ರಕಟಿಸಿರುವ ರುಚಿ ಸ್ವಲ್ಪ different ಆಗಿದೆ. ಸಾಯಂಕಾಲ ತಿಂಡಿಗೆ ಇದು ಸೂಕ್ತವಾಗಿದೆ. ‍ಸಾಮಾಗ್ರಿ: ‍‍‍‍ತೆಳ್ಳನೆ ಅವಲಕ್ಕಿ (ಪೇ‍ಪರ್ ಅವಲಕ್ಕಿ/ ‍ಬಾಂಬೆ ‍‍ಅವಲಕ್ಕಿ) - ೩ ಕಪ್ ‍ ‍ಸಕ್ಕರೆ ರುಚಿಗೆ ತಕ್ಕಷ್ಟು ‍ ಸಾರಿನ ಪುಡಿ - ಖಾರಕ್ಕೆ ತಕ್ಕಷ್ಟು ನಿಂಬೆ ರಸ - ೧ ಚಮಚ ಕಾಯಿ ತುರಿ - ೧ ಕಪ್ ಉಪ್ಪು ರುಚಿಗೆ ತಕ್ಕಷ್ಟು ಸಣ್ಣಗೆ ತುಂಡು ಮಾಡಿದ ನೀರುಳ್ಳಿ - ೧ ಕಪ್ ಒಗ್ಗರಣೆಗೆ: ‍ಸಾಸಿವೆ ಕರಿಬೇವು ಕೆಂಪು ಬ್ಯಾಡಗಿ ಮೆಣಸು/ ಒಣ ಮೆಣಸು ಉದ್ದಿನ ಬೇಳ ತೆಂಗಿನ ಎಣ್ಣೆ (ಬೇರೆ ಎಣ್ಣೆ ಬಳಸಬಹುದು, ಆದರೆ ತೆಂಗಿನ ಎಣ್ಣೆ ಯ ರುಚಿಯ ಮಜಾ ಸಿಗದು :))