Skip to main content
Home
  • English
  • ಕನ್ನಡ

User menu

  • Sign In

Front Rotor Banner

Cookies
Home Made Snacks
Home Made items
Ridged nut !!!
Cookies
Home Made Snacks
Home Made items
Ridged nut !!!

ಪ್ರೊಫೈಲ್

ಪೂರ್ಣ ಹೆಸರು:ಸುಮ ನಾಡಿಗ್ 

ಇ-ಮೇಯ್ಲ್: sumaaddoor@gmail.com

ಪರಿಚಯ:

ಮೂಲತಃ ಮಂಗಳೂರಿನವಳು. ಐಡೀಲ್ಸ್ ಐಸ್ ಕ್ರೀಮ್, ಕಾಕುಂಜೆ ಕಾರ್ನ್ ಇಷ್ಟಪಡುವ ಹುಡುಗಿ.

                                 ಬೆಂಗಳೂರಿನಲ್ಲಿ ಪತಿವರ್ಯರೊಡಗೂಡಿ ನಡೆಸುತ್ತಿರುವ ಪುಟ್ಟ ಕಂಪೆನಿಯೊಂದರಲ್ಲಿ ಕೆಲಸ.

ಸುಮ ನಾಡಿಗ್ ಬಗ್ಗೆ ಇನ್ನಷ್ಟು

ರುಚಿ

ಕ್ಯಾಬೇಜ್ ಗಟ್ಟಿ
ಬೇಕಿರುವ ಸಾಮಗ್ರಿ:
1. ದೋಸೆ ಅಕ್ಕಿ ೧ ಕಪ್ 2. ಕಾಯಿ ತುರಿ ೧ ಕಪ್ 3. ಉಪ್ಪು ರುಚಿಗೆ ತಕ್ಕಷ್ಟು 4. ಬೆಲ್ಲ ರುಚಿಗೆ ತಕ್ಕಷ್ಟು 5. ಹುಳಿ ರುಚಿಗೆ ತಕ್ಕಷ್ಟು 6. ಕೊತ್ತಂಬರಿ ಬೀಜ ೧/೪ ಕಪ್ 7. ಜೀರಿಗೆ ಸ್ವಲ್ಪ 8. ಬ್ಯಾಡಗಿ ಮೆಣಸು (ಖಾರಕ್ಕೆ ತಕ್ಕಷ್ಟು) 9. ಕ್ಯಾಬೇಜ್ ೧ ಕಪ್
ತಯಾರಿಸುವ ವಿಧಾನ:
 
  • ಬೆಳಗ್ಗೆ ಎದ್ದೊಡನೆ ದೋಸೆ ಅಕ್ಕಿ ನೆನೆಸಿಟ್ಟುಕೊಳ್ಳಿ.
  • ಕಾಯಿ ತುರಿ, ಉಪ್ಪು, ಹುಳಿ, ಬೆಲ್ಲ, ಕೊತ್ತಂಬರಿ ಬೀಜ, ಜೀರಿಗೆ, ಬ್ಯಾಡಗಿ ಮೆಣಸು ಸೇರಿಸಿ ರುಬ್ಬಿಕೊಳ್ಳಿ.
  • ಈ ಮಿಶ್ರಣಕ್ಕೆ ನೆನೆದ ಅಕ್ಕಿಯನ್ನು ಸೇರಿಸಿ ಸ್ವಲ್ಪ ಒರಟಾಗಿ ರುಬ್ಬಿಕೊಳ್ಳಿ.
  • ಹಾಗೆ ತಯಾರಾದ ಹಿಟ್ಟಿಗೆ ಕ್ಯಾಬೇಜ್ ಅನ್ನು ಜೊತೆ ಸೇರಿಸಿ ಇಡಿ.
  • Cooker ಅಥವಾ ಇಡ್ಲಿ ಅಟ್ಟದಲ್ಲಿ ನೀರು ಹಾಕಿ ಒಲೆಯ ಮೇಲೆ ಇಡಿ.
  • ಒಂದು ಅಗಲದ ಪಾತ್ರೆಯನ್ನು ನೀರಿನ ಮೇಲಿಟ್ಟು, ತಯಾರಿಸಿದ ಮಿಶ್ರಣವನ್ನು ಒಂದೊಂದೆ ಹಿಡಿಯಂತೆ, ಈ ಪಾತ್ರೆಯಲ್ಲಿ ಇಡಿ.
  • ಹವೆ/ಹಬೆಯಲ್ಲಿ ಬೇಯಿಸಿ.
  • ೨೦ ನಿಮಿಷದಲ್ಲಿ ಕ್ಯಾಬೇಜ್ ಗಟ್ಟಿ ರೆಡಿ.

ಟಿಪ್:

  • ರುಬ್ಬಿಕೊಳ್ಳುವಾಗ ನೀರು ಬೇಕಿರುವಷ್ಟೇ ಹಾಕಿ, ಇಲ್ಲವಾದರೆ ಗಟ್ಟಿ ಕಟ್ಟಲು ಕಷ್ಟವಾದೀತು.
  • ಕ್ಯಾಬೇಜ್ ಗಟ್ಟಿಯನ್ನು ಬೆಣ್ಣೆಯೊಂದಿಗೆ ಸವಿದರೆ, ಬಲು ರುಚಿ.

Pages

  • « first
  • ‹ previous
  • …
  • 2
  • 3
  • 4
  • 5
  • 6
  • 7
  • 8
  • 9
  • 10
  • next ›
  • last »

©Suma Addoor. All Rights Reserved.

Provided by : Saaranga